Tuesday, April 5, 2022

ಬಣ್ಣನೆಗಳ ಬದುಕು

   

     ಬಹಳಷ್ಟು ದಿನಗಳಿಂದ ಬಹಳಷ್ಟು ಜನರ ಬಾಯಲ್ಲಿ Dollar ಸೊಸೆ ಪುಸ್ತಕದ ಬಗ್ಗೆ ಕೇಳಿದ ನನಗೆ, ಪುಟಾಣಿ  ಗೆಳತಿ ದೇವಕಿ ಜೊತೆ ಪುಸ್ತಕದ ಮಳಿಗೆಗೆ ಹೋದಾಗ ಈ ಪುಸ್ತಕ ಸಿಕ್ಕಿತು, ತಡ ಮಾಡುವ ಮನಸ್ಸಾಗದೆ ಎರಡೆ ದಿನಗಳಲ್ಲಿ ಪೂರ್ತಿ ಪುಸ್ತಕ ಓದಿ ಮುಗಿದಿತ್ತು, ಆದರೆ ನಾಲ್ಕಾರು ದಿನಗಳು ಮನಸ್ಸು ಇಲ್ಲಿನ ವ್ಯಕ್ತಿಗಳು ವ್ಯಕ್ತಿತ್ವಗಳ ಬಗ್ಗೆ ಮುಂದುವರೆಯುತ್ತಾ... ಇದನ್ನೇ ಓದುತ್ತಿದ್ದ dearest freind ಮೇಘನಾ ಜೊತೆ ಚರ್ಚೆಗಳು, ಮೋದಲಿಸುವುದು, ವರ್ಣನೆಗಳಾದವು. ಯಾವುದು ಉತ್ಪ್ರೇಕ್ಷೆ ಆಗಿರಲಿಲ್ಲ ಯಾಕಂದರೆ ಪುಸ್ತಕದ ಒಡತಿ ಸುಧಾಮೂರ್ತಿ ರವರು...... So ಅವರ ಯಾವದೇ ಪುಸ್ತಕ -ಕೃತಿಗಳಿಗೆ ಈ ಎಲ್ಲವೂ common ಆಗಿ ಸಿಗುತ್ತದೆ, ಸಿಗಲೇ ಬೇಕು. ಅವರ ವಿಷಯಗಳ ಹೂರಣವೇ ಹಾಗಿರುತ್ತದೆಯೋ ಏನೊ....
      ಮೊದಲಿಗೆ ನಾನು ಪುಸ್ತಕ ತೆರದೊಡನೆ ಕಣ್ಣಿಗೆ ಬಿದದ್ದು ಮುದ್ರಣಗಳ ಸಂಖ್ಯೆಯ ಪಟ್ಟಿ, 23 ಬಾರಿ ಮುದ್ರಣಗಳಾಗಿವೆ. ವ್ಹಾ....... ಶಭಾಷ್ ಇಂಥ ಪುಸ್ತಕ ನನ್ನ ಕೈಲಿದೆ ಅನ್ನೋದು ಇನ್ನಷ್ಟು ಹುಮ್ಮಸ್ಸು ತಂದಿತ್ತು. ಇನ್ನು ಪುಸ್ತಕ complete ಆಗೋವರೆಗೂ ಪುಸ್ತಕ ಬಿಡುವ ಮನಸ್ಸಾಗಲಿಲ್ಲ. ರಾಜೀವ, ವಿನುತಾ, ತುಮಕೂರು ಹೀಗೆ ಚಿರಪರಿಚಿತ ಅನ್ನಿಸುವ ಪಾತ್ರಗಳು, ಸನ್ನಿವೇಶಗಳು.... ಕರ್ತೃವಿನ ಬಗ್ಗೆ ಹೇಳುವ ಸಾಮರ್ಥ್ಯ ನನಗಿಲ್ಲ. ಕಥೆಯುದ್ಧಕ್ಕೂ ಬರುವ ಪ್ರತಿ ಸನ್ನಿವೇಶಗಳು ನಮ್ಮ ದಿನನಿತ್ಯದಲ್ಲಿ ಬರುವ ನೋಟವಾಗಿತ್ತು. ಇನ್ನು ಕೆಲವು ನಮ್ಮ ವೈಯಕ್ತಿಕತೆಗೆ ಧೈರ್ಯದ ಮೆರಗು ತುಂಬಿದಂತಿದೆ. ಮನೆಯೊಳಗಿನ ರಾಜಕೀಯ, ಸಂಸಾರದಲ್ಲಿನ ಅಸಮಾನತೆ, Dollar ಸೊಸೆಯ ಬಗೆಗಿನ ಬಣ್ಣನೆ, ಪ್ರಾಮುಖ್ಯತೆ, ತಳುಕು, ರೂಪಾಯಿ ಸೊಸೆಯ ಒಳ್ಳೆತನ, ಸಹಜತೆಗೆ ಸವಾಲಾಗಿತ್ತು. ಕೊನೆಗೆ ಒಳಿತು ಗೆದ್ದಿದು ಸಂತೋಷ ಅನ್ನಿಸಿತು. ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬ ವ್ಯಕ್ತಿಯ ಸಂಪೂರ್ಣ ಅವಧಿಯಲ್ಲಿ ಬರುವ ಸ್ಥಿತಿಗತಿಗಳು ಅದರ ನೋವು-ನಲಿವುಗಳು, ಅದೇ ಪರಿಸ್ಥಿತಿಗಳು ಮನದ ಅಹಂಕಾರ ಅಳಿಸಿ ಮಾನವನ ಬದಲಿಸುವ ಪರಿ, ಸತ್ಯದ ಅರಿವಾಗುವಿಕೆ... ಸುಳ್ಳಿನ, ಡಂಬಚಾರದ ಅನಾವರಣ, ಹಣದಿಂದಲೇ ಎಲ್ಲಾ ಅನ್ನುವವರಿಗೆ ಹಣದ limitations, ನಿಷ್ಕಲ್ಮಶ ಭಾವನೆಗಳ ಬೆಲೆ ಅದರ ಆನಂದ ಗೋಚರಿಸುತ್ತದೆ. Asusually ಪುಸ್ತಕದ ಕಥೆ, ಅದರ ಆಳ, ಪದಗಳ - ವಾಕ್ಯಗಳ ವ್ಯಕ್ತತೆ ತುಂಬ ಸೊಗಸಾಗಿದ್ದು ಓದಬೇಕು ಎನಿಸಿಕೊಳ್ಳುವ ಕೃತಿ ಆಗಿದೆ ಅಷ್ಟಲ್ಲದೆ ಇಷ್ಟೊಂದು ಬಾರಿ ಮುದ್ರಣವಾದೀತೇ.. ಸುಧಾಮೂರ್ತಿ madam ಗೆ ಮನಃಪೂರ್ವಕವಾಗಿ ನಮಸ್ಕರಿಸುತ್ತಾ ನನ್ನ ಅನಿಸಿಕೆಯನ್ನು ಕೊನೆಗೂಳಿಸುತಿದ್ದೇನೆ..
ಡಾ. ಪೃಥ್ವಿ ಎಂ ಎಲ್